top of page

ವಿಶೇಷ ಸಂದರ್ಭಗಳಲ್ಲಿ ಪ್ರವೇಶ ಶುಲ್ಕಕ್ಕೆ ರಿಯಾಯಿತಿ ಮತ್ತು ಗಡುವು ವಿಸ್ತರಣೆ ನೀಡಲು ಸಾಧ್ಯವಿದೆ.

ಮನವಿ ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ.

"ಅವಳ ಹೆಜ್ಜೆ" ಕನ್ನಡ ಕಿರುಚಿತ್ರೋತ್ಸವ - 2025

ಮಹಿಳಾ ನಿರ್ಮಾಪಕ ಮತ್ತು ನಿರ್ದೇಶಕರಿಂದ ಸ್ಪರ್ಧೆಗೆ ಅರ್ಜಿ ಆಹ್ವಾನ

ಕೊನೆಯ ದಿನ: ಏಪ್ರಿಲ್ 30, 2025

ಕಿರುಚಿತ್ರೋತ್ಸವವನ್ನು ಜೂನ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಸಲಾಗುವುದು. 

ಅತ್ಯುತ್ತಮ ಕಿರುಚಿತ್ರಕ್ಕೆ "ಅವಳ ಹೆಜ್ಜೆ ಬಹುಮಾನ" ನಗದು ₹1,00,000 (ಒಂದು ಲಕ್ಷ) ಪಡೆಯುವ ಅವಕಾಶವಿದೆ.

ಜೊತೆಗೆ, ಈ ಕೆಳಗಿನ ವಿಶೇಷ ವರ್ಗಗಳಲ್ಲಿ ತಲಾ ಒಂದು ಚಿತ್ರಕ್ಕೆ ಮೆಚ್ಚುಗೆಯ ಬಹುಮಾನ ನಗದು ₹10,000 (ಹತ್ತು ಸಾವಿರ) ಪಡೆಯುವ ಅವಕಾಶವಿದೆ. 

  • ಅತ್ಯುತ್ತಮ ಜೀವನಚರಿತ್ರೆಯ ಚಿತ್ರ

  • ಅತ್ಯುತ್ತಮ ಅನಿಮೇಶನ್ ಚಿತ್ರ

  • ಅತ್ಯುತ್ತಮ ಮಕ್ಕಳ ಚಲನಚಿತ್ರ

  • ಅತ್ಯುತ್ತಮ ಪ್ರಥಮ ನಿರ್ದೇಶನದ ಚಿತ್ರ

  • ಅತ್ಯುತ್ತಮ ವಿದ್ಯಾರ್ಥಿನಿಯ ಚಿತ್ರ

  • ಅತ್ಯುತ್ತಮ ಕ್ರೀಡಾ ವಿಷಯದ ಚಿತ್ರ

  • ಅತ್ಯುತ್ತಮ ಸಂರಕ್ಷಣಾ ವಿಷಯದ ಚಿತ್ರ 

  • ರಾಜಕೀಯ/ಪ್ರಜಾಪ್ರಭುತ್ವ ವಿಷಯದ ಅತ್ಯುತ್ತಮ ಚಲನಚಿತ್ರ

 

​ಇದು ಕೇವಲ ಕಿರುಚಿತ್ರ ಸ್ಪರ್ಧೆಯಲ್ಲ. ಕನ್ನಡ ಚಿತ್ರರಂಗದಲ್ಲಿ ಮಹಿಳಾ ಮುಖ್ಯಪಾತ್ರಗಳಿಗೆ, ಮಹಿಳೆಯರ ಅನುಭವ ಮತ್ತು ದೃಷ್ಟಿಕೋನಗಳಿಗೆ ವೇದಿಕೆ ಸೃಷ್ಟಿಸುವುದರ ಮೂಲಕ, ಮಹಿಳೆಯರ ಬಗ್ಗೆ, ಲಿಂಗ ಸಮಾನತೆಯ ಬಗ್ಗೆ ಸಮಾಜದ ಧೋರಣೆಗಳನ್ನು ರೂಪಿಸುವಲ್ಲಿ ನುರಿತರಿಗೂ, ಉದಯೋನ್ಮುಖರಿಗೂ ನಮ್ಮೊಂದಿಗೆ ಹೆಜ್ಜೆ ಹಾಕಲು ಆಹ್ವಾನ.  

  • ​ಕಿರುಚಿತ್ರ ಸಲ್ಲಿಸಲು ಕೊನೆಯ ದಿನ: ಏಪ್ರಿಲ್ 30, 2025.  ಪ್ರವೇಶ ಶುಲ್ಕ  ₹1000.

  • ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಾರ್ಚ್ 31, 2025 ರೊಳಗೆ ಕಿರುಚಿತ್ರ ಸಲ್ಲಿಸಿದಲ್ಲಿ ಪ್ರವೇಶ ಶುಲ್ಕ ₹0

ಮೇಲ್ಕಂಡ ಬಹುಮಾನಗಳಲ್ಲದೇ, ಉದಯೋನ್ಮುಖ ಮಹಿಳಾ ನಿರ್ದೇಶಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇನ್ನೂ ನಿರ್ಮಾಣವಾಗಿರದ ಅತ್ಯುತ್ತಮ ಚಿತ್ರಕಥೆಗೆ "ಚಿತ್ರ ನಿರ್ಮಾಣ ಅನುದಾನ" ವನ್ನು ನೀಡುವ ಯೋಜನೆಯಿದೆ. ಆಯ್ಕೆಯನ್ನು ಜೂನ್ ತಿಂಗಳಿನಲ್ಲಿ ನಡೆಯಲಿರುವ ಕಿರುಚಿತ್ರೋತ್ಸವ ಸಮಾರಂಭದಲ್ಲಿ ಪ್ರಕಟಿಸಲಾಗುವುದು. 

ಆಯ್ಕೆಯಾದ ಚಿತ್ರಕಥೆಗೆ ನಿರ್ಮಾಣದಲ್ಲಿ ನುರಿತರಿಂದ ಮಾರ್ಗದರ್ಶನದ ಜೊತೆಗೆ ಗರಿಷ್ಟ ₹1,00,000 (ಒಂದು ಲಕ್ಷ) ಅನುದಾನವನ್ನು ನಿರ್ಮಾಣದ ಅನೇಕ ಹಂತದಲ್ಲಿ ಕಂತಿನ ಮೂಲಕ ನೀಡಲಾಗುವುದು. "ಚಿತ್ರ ನಿರ್ಮಾಣ ಅನುದಾನ"ಕ್ಕೆ ಅರ್ಹತೆ ಹೊಂದಿರುವವರು ಏಪ್ರಿಲ್ 30, 2025 ರೊಳಗೆ ಪ್ರವೇಶ ಶುಲ್ಕ ₹1,000 ದೊಂದಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕು. 

“ಅವಳ ಹೆಜ್ಜೆ” – ಹೆಣ್ಣಿನ ಹೆಜ್ಜೆಗುರುತು ಆಟದ ಮೈದಾನದಿಂದ ಬೋರ್ಡ್ ರೂಂವರೆಗೂ ಎಲ್ಲೆಡೆ ಕಾಣುವ ಆಶಯದೊಂದಿಗೆ ಆರಂಭಿಸಿದ ಸಾಮಾಜಿಕ ಸಂಕಲ್ಪ. 2018 ರಲ್ಲಿ ಮಹಿಳೆಯರು ತಯಾರಿಸಿದ ಕಿರುಚಿತ್ರಗಳ ಪ್ರದರ್ಶನವೂ ಸೇರಿದಂತೆ ಕಳೆದ ಎಂಟು ವರ್ಷಗಳಿಂದ ಅನೇಕ ವಿನೂತನ ಕಾರ್ಯಕ್ರಮಗಳನ್ನು ನಡೆಸಿದ್ದೇವೆ.

ಅವಳ ಹೆಜ್ಜೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.  

bottom of page