top of page

ನಾವು ಕಾಲೇಜು ಹಾಗೂ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಾಗಾರಗಳನ್ನು ನಡೆಸುತ್ತೇವೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ.

“ಅವಳ ಹೆಜ್ಜೆ” ಯ ತರಬೇತಿ ಶಿಬಿರಗಳು ಇತಿಮಿತಿಗಳನ್ನು ದಾಟಬಯಸುವ ಹೆಣ್ಣುಮಕ್ಕಳು ಮತ್ತು ಮಹಿಳೆಯರಿಗೆ ಹೆಚ್ಚು ಸೂಕ್ತ. ವಿವಿಧ ಆಸಕ್ತಿ, ಅನುಭವ ಮತ್ತು ನಿರೀಕ್ಷೆಗೆ ಅನುಗುಣವಾಗುವಂತೆ ತರಬೇತಿ ಶಿಬಿರಗಳ ವಿನ್ಯಾಸ ಮಾಡುತ್ತೇವೆ. ಮಹಿಳೆಯರಿಗೆ, ತಮ್ಮ ಸಾಧನೆಯ ಹಾದಿಯಲ್ಲಿ ಎದುರಾಗುವ ಅಡಚಣೆಗಳನ್ನು ಗುರುತಿಸಿ, ಪರಿಣಾಮಕಾರಿಯಾಗಿ ಎದುರಿಸಿ, ತಮ್ಮ ಪೂರ್ಣ ಸಾಮರ್ಥ್ಯದ ಗುರಿಯನ್ನು ಯಶಸ್ವಿಯಾಗಿ ಮುಟ್ಟಲು ಬೇಕಾಗುವಂತಹ ಆತ್ಮಸ್ಥೈರ್ಯ, ಆತ್ಮವಿಶ್ವಾಸಗಳನ್ನು ಬೆಳೆಸಲು ಅಗತ್ಯವಾದ ತರಬೇತಿಯನ್ನು ನೀಡುತ್ತೇವೆ.

 

ನಮ್ಮ ತರಬೇತಿ ಶಿಬಿರಗಳ ವಿನ್ಯಾಸದಲ್ಲಿ ಕ್ರಮಬದ್ಧತೆಯೊಂದಿಗೆ ಸೃಜನಶೀಲತೆಯನ್ನು ಸಮೀಕರಿಸಿ, ಮಹಿಳಾ ಸಬಲೀಕರಣಕ್ಕೆ ಬಳಸಿಕೊಂಡ ವಿನೂತನತೆಯನ್ನು ಕಾಣಬಹುದು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಯಶಸ್ವಿಯಾಗಿರುವ ಅನೇಕ ಮಹಿಳೆಯರ ನಿಜಜೀವನದ ಕತೆಗಳು, ಜೀವನಾನುಭವಗಳು, ಒಳನೋಟಗಳು ಹಾಸು ಹೊಕ್ಕಾಗಿರುವುದನ್ನೂ ಕಾಣಬಹುದು. ಗುಂಪು ಚರ್ಚೆ, ವೀಡಿಯೊಗಳು, ನಿಜಜೀವನದ ಉದಾಹರಣೆಗಳು, ಕೇಸ್ ಸ್ಟಡಿ, ಗುಂಪು ಚಟುವಟಿಕೆ, ಮುಂತಾದ ನೂತನ ಕಲಿಕಾ -ವಿಧಾನಗಳನ್ನು ಅಳವಡಿಸಿ ಈ ಕೆಳಕಂಡ ವಿಷಯಗಳಲ್ಲಿ ತರಬೇತಿಯನ್ನು ಕನ್ನಡ ಮತ್ತು ಇಂಗ್ಲೀಷಿನ ಸರಳ ಆಡುಭಾಷೆಯಲ್ಲಿ ನೀಡುತ್ತೇವೆ:

  • ಮಹಿಳೆಯರು ಹಿಂದೆ ಬೀಳುವ ಕಾರಣಗಳ ಅರಿವು

  • ಅಡೆತಡೆಗಳನ್ನು ಜಯಿಸುವ ಸೂತ್ರಗಳು.

  • ಕ್ರಿಯಾತ್ಮಕ ಆಲೋಚನಾ ವಿಧಾನಗಳು

  • ಯಶಸ್ವಿ ಮಹಿಳೆಯರ ಅನುಭವಗಳು

  • ಆತ್ಮವಿಶ್ವಾಸ, ಆತ್ಮಸ್ಥೈರ್ಯ

 

ನಮ್ಮ ಪ್ರಮುಖ ಶಿಬಿರ  

ಕ್ಯಾಂಪಸ್ ತರಬೇತಿ - ವಿದ್ಯಾರ್ಥಿನಿಯರಿಗಾಗಿ

ಪ್ರತೀ ವರ್ಷ 10ನೇ ಮತ್ತು 12 ನೇ ತರಗತಿಯ ಫಲಿತಾಂಶ ಬಂದಾಗ “ವಿದ್ಯಾರ್ಥಿನಿಯರದೇ ಮೇಲುಗೈ” ಎಂಬ ವರದಿಯನ್ನು ನೋಡುತ್ತೇವೆ.ವಿಪರ್ಯಾಸವೆಂದರೆ, ಅದೇ ಯುವತಿಯರು ಕೆಲವೇ ವರ್ಷಗಳಲ್ಲಿ ತಮ್ಮ ವೃತ್ತಿಗಳಲ್ಲಿ ಬಹುತೇಕ ಹಿಂದೆ ಬೀಳುತ್ತಾರೆ. ಹೀಗಾಗದಂತೆ ತಡೆದು, ಯುವತಿಯರು ಮುಂಚೂಣಿಯಲ್ಲಿರಲು ಸಹಕರಿಸುವುದು ಅವಳ ಹೆಜ್ಜೆಯ ತರಬೇತಿಯ ಪ್ರಮುಖ ಉದ್ದೇಶ!


ತರಬೇತಿ ಶಿಬಿರಗಳು ಸಾಮಾನ್ಯವಾಗಿ 2 ದಿನ (ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ರವರೆಗೆ) ನಡೆಯುತ್ತವೆ.  ____________________________

ನಮ್ಮ ಇತರ ತರಬೇತಿಗಳು


ಉದ್ಯೋಗಿಗಳು

ನಿಮ್ಮ ಸಹೋದ್ಯೋಗಿಗಳಷ್ಟೇ ಶ್ರಮವಹಿಸುತ್ತಿದ್ದರೂ ಅನೇಕ ವೇಳೆ ಬಡ್ತಿ, ಅಧಿಕ ಜವಾಬ್ದಾರಿಯಿರುವ ಹುದ್ದೆಗಳು ನಿಮಗೆ ಸಿಗಬೇಕಾದಷ್ಟು ಸಿಗುತ್ತಿಲ್ಲವೇ? ಆಶ್ಚರ್ಯವಿಲ್ಲ. ವೃತ್ತಿಜೀವನದಲ್ಲಿ ಪುರುಷರಿಗಿಂತ ಮಹಿಳೆಯರು ವಿಶೇಷ ಅಡೆತಡೆಗಳನ್ನು ಎದುರಿಸುತ್ತಾರೆ. ಮಹಿಳೆಯರು ತಿಳಿದೋ, ತಿಳಿಯದೆಯೋ ಅಳವಿಡಿಸಿಕೊಳ್ಳುವ ಸೋಲಿನ ಅಭ್ಯಾಸಗಳನ್ನು ತೊಡೆದು ಗೆಲ್ಲುವಂತ ಪದ್ಧತಿಗಳನ್ನು ರೂಢಿಸಿಕೊಳ್ಳುವ ಮೂಲಕ ಅಂತಹ ಅಡೆತಡೆಗಳನ್ನು ಸಾಕಷ್ಟು ಹತ್ತಿಕ್ಕಲು ಸಾಧ್ಯವಿದೆ. ಈ ಶಿಬಿರದಲ್ಲಿ ನಿಮ್ಮ ಯಶಸ್ಸಿಗೆ ಪೂರಕವಾಗುವಂತಹ ತರಬೇತಿ ನೀಡುತ್ತೇವೆ.

____________________________

ಗೃಹಿಣಿಯರು

ಪ್ರತೀ ಮಹಿಳೆಯೂ ಕೆಲಸ ಮಾಡುವವರೇ. ಗೃಹಿಣಿಯರು ತಮ್ಮ ಸಮಯ ಮತ್ತು ಶ್ರಮವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಸೂಕ್ತವಾದ ಸಾಧನ ಮತ್ತು ತಂತ್ರಗಳನ್ನು ಈ ಶಿಬಿರದಲ್ಲಿ ಕಲಿಯಬಹುದು.

____________________________

ನಿಮ್ಮ ಸಂಗಾತಿ ಮತ್ತು ನೀವು

ಈ ಶಿಬಿರದಲ್ಲಿ ನಿಮ್ಮ ಆಕಾಂಕ್ಷೆ ಮತ್ತು ಜವಾಬ್ದಾರಿಗಳಲ್ಲಿ ಸಮತೋಲನ ಕಾಯ್ದುಕೊಂಡು ನಿಭಾಯಿಸಲು ಸೂಕ್ತ ಪ್ರಾಯೋಗಿಕ ಸಾಧನ ಮತ್ತು ತಂತ್ರಗಳ ತರಬೇತಿ ನೀಡುತ್ತೇವೆ.

____________________________

ಬಳಗದ ನಾಯಕಿ 

ಬಳಗ ಅಂದರೆ ಸೋದರಿಕೆ ಪರಿಕಲ್ಪನೆ ಅಡಿಯಲ್ಲಿ ಮಹಿಳೆಯರು ಪರಸ್ಪರ ಕಲಿಕೆ, ಬೆಳವಣಿಗೆ ಮತ್ತು ಬೆಂಬಲ ನೀಡಲು ರಚಿಸಿಕೊಳ್ಳುವ, ನಿಯಮಿತವಾಗಿ ಭೇಟಿಯಾಗುವ ಸಣ್ಣ ಗುಂಪು.


ಈ ಶಿಬಿರದಲ್ಲಿ ಲಿಂಗ ಸಂವೇದನೆ ಅರಿವು, ಅಡೆತಡೆಗಳಿಗೆ ಪರಿಹಾರಗಳ ಕಂಡುಕೊಳ್ಳುವಲ್ಲಿ ಪರಸ್ಪರ ಬೆಂಬಲ ನೀಡುವ ಬಗೆ, ಸಾರ್ವಜನಿಕ ವಿಷಯ ಮಂಡನೆಯ ಅಭ್ಯಾಸ ಮುಂತಾದ ಬಳಗ ನೇತೃತ್ವ ವಹಿಸಲು ಬೇಕಾದ ಕೌಶಲ್ಯಗಳ ತರಬೇತಿ ನೀಡುತ್ತೇವೆ.

____________________________

ಉದ್ಯೋಗಾಕಾಂಕ್ಷಿಗಳು

ಈ ಶಿಬಿರದಲ್ಲಿ ಕಾರಣಾಂತರಗಳಿಂದ ಉದ್ಯೋಗದಿಂದ ಹೊರಬಂದು ಮತ್ತೆ ಸೇರಲು ಪ್ರಯತ್ಸಿಸುವವರಿಗೆ ಆತ್ಮಸ್ಥೈರ್ಯ, ಆತ್ಮವಿಶ್ವಾಸಗಳನ್ನು ಬೆಳೆಸಲು ಅಗತ್ಯವಾದ ತರಬೇತಿಯನ್ನು ನೀಡುತ್ತೇವೆ.

____________________________

ನಿಮ್ಮ ಮಗ/ಳು ಮತ್ತು ನೀವು

8ರಿಂದ 16 ವಯಸ್ಸಿನ ಮಕ್ಕಳು ತಂದೆತಾಯಿಯರೊಂದಿಗೆ ಭಾಗವಹಿಸಿ ಆ ಶಿಬಿರದ ಲಾಭ ಪಡೆಯಬಹುದು.


bottom of page