top of page

ನಮ್ಮ ತಂಡ

  • Writer: Avala Hejje
    Avala Hejje
  • Dec 2, 2024
  • 2 min read

Updated: Mar 14

ಶಾಂತಲಾ ದಾಮ್ಲೆ, “ಅವಳ ಹೆಜ್ಜೆ” ಯ ಸ್ಥಾಪಕರು
ಶಾಂತಲಾ ದಾಮ್ಲೆ, “ಅವಳ ಹೆಜ್ಜೆ” ಯ ಸ್ಥಾಪಕರು

ಶಾಂತಲಾ ದಾಮ್ಲೆ “ಅವಳ ಹೆಜ್ಜೆ” ಯ ಸ್ಥಾಪಕರು. ದಾವಣಗೆರೆಯ ಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಿಂದ ಬಿ.ಇ. ಪದವಿ ಮತ್ತು ಅಮೆರಿಕಾದ ವರ್ಜೀನಿಯಾ ಟೆಕ್ ಯುನಿವರ್ಸಿಟಿಯಿಂದ ಎಂ.ಬಿ.ಎ. ಪದವಿ ಪಡೆದಿದ್ದಾರೆ. ಭಾರತದಲ್ಲಿ 4 ವರ್ಷ, ನಂತರ ಅಮೆರಿಕದಲ್ಲಿ 12 ವರ್ಷ, ಐಟಿ ಮತ್ತು ಮ್ಯಾನೇಜ್ಮೆಂಟ್ ಕ್ಷೇತ್ರಗಳಲ್ಲಿ ಉದ್ಯೋಗದ ಅನುಭವ ಹೊಂದಿದ್ದಾರೆ. 2010 ರಲ್ಲಿ ಭಾರತಕ್ಕೆ ಮರಳಿ, ಭ್ರಷ್ಟಾಚಾರ-ವಿರೋಧಿ, ಮಹಿಳಾ ಸಬಲೀಕರಣ ಮುಂತಾದ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

 
ಮಾಲವಿಕ ಗುಬ್ಬಿವಾಣಿ, "ಗುಬ್ಬಿವಾಣಿ ಟ್ರಸ್ಟ್" ನ ಸ್ಥಾಪಕರು ಮತ್ತು ಟ್ರಸ್ಟೀ
ಮಾಲವಿಕ ಗುಬ್ಬಿವಾಣಿ, "ಗುಬ್ಬಿವಾಣಿ ಟ್ರಸ್ಟ್" ನ ಸ್ಥಾಪಕರು ಮತ್ತು ಟ್ರಸ್ಟೀ

ಮಾಲವಿಕ ಗುಬ್ಬಿವಾಣಿ ಮೈಸೂರಿನ SJCE ಕಾಲೇಜಿನಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಇ. ಪದವಿ ಪಡೆದಿದ್ದಾರೆ. ಇನ್ ಫೋಸಿಸ್‌ನಲ್ಲಿ ಐಟಿ ವೃತ್ತಿಪರರಾಗಿ 15 ವರ್ಷಗಳ ಕೆಲಸದ ಅನುಭವ ಹೊಂದಿರುವುದಲ್ಲದೇ, ಸಾಮಾಜಿಕ ಕಾರ್ಯಗಳಲ್ಲಿ ಒಂದು ದಶಕದ ಸುದೀರ್ಘ ಅನುಭವವನ್ನು ಹೊಂದಿದ್ದಾರೆ. ಹಲವಾರು ಮಹಿಳಾ ಪರ ಹೋರಾಟಗಳು, ಭ್ರಷ್ಟಾಚಾರ ವಿರೋಧಿ ಅಭಿಯಾನಗಳು, ನಾಗರಿಕರ ಹಕ್ಕು-ಕರ್ತವ್ಯಗಳ ಬಗ್ಗೆ ಅರಿವು, ಕನ್ನಡ ಪರ ಪ್ರಚಾರಗಳು, ಪರಿಸರ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.




 

ಉಷಾ ಸಂಪತ್ಕುಮಾರ್ “ಅವಳ ಹೆಜ್ಜೆ” ಯ ಸಂಪರ್ಕ ನಿರ್ದೇಶಕರು. ಮೂಲತಃ ಬೆಂಗಳೂರಿನವರಾದ ಉಷಾ ಒಬ್ಬ ಸಾಮಾಜಿಕ ಕಾರ್ಯಕರ್ತೆ. ಮೈಸೂರಿನ ‘ಸಮತಾ’ ಮತ್ತು ‘ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ ಗಳೊಂದಿಗೆ ಗುರುತಿಸಿಕೊಂಡಿದ್ದಾರೆ. ಇಂಗ್ಲಿಷ್ ಸಾಹಿತ್ಯದಲ್ಲಿ ಮತ್ತು ಶಿಕ್ಷಣದಲ್ಲಿ ಪದವೀಧರೆಯಾಗಿರುವ ಉಷಾ, ವಿಶ್ವ ಮಂಗಳ ಎಜುಕೇಶನ್ ಸೊಸೈಟಿ, ಮಂಗಳೂರು ವಿಶ್ವವಿದ್ಯಾಲಯ ಕ್ಯಾಂಪಸ್ ಸೇರಿದಂತೆ ಅನೇಕ ಶಾಲೆಗಳಲ್ಲಿ ಶಿಕ್ಷಕಿಯಾಗಿದ್ದರು.


 

ಅವಳ ಹೆಜ್ಜೆ ಕಿರು ಚಿತ್ರೋತ್ಸವ 2025 ಕಾರ್ಯನಿರ್ವಾಹಕ ತಂಡ

 

ಪ್ರೇರಣಾ ಗೋಪಾಲ್ ಅವರು ಚಲನಚಿತ್ರ ನಿರ್ದೇಶಕಿ ಮತ್ತು ನಿರ್ಮಾಪಕಿ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಆರು ವರ್ಷಕ್ಕೂ ಅಧಿಕ ಅನುಭವ ಹೊಂದಿದ್ದಾರೆ. ಅವರು ಲಾಸ್ ಏಂಜಲಿಸ್‌ನ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಫಿಲ್ಮ್ ಮತ್ತು ಮೀಡಿಯಾ ಪ್ರೊಡಕ್ಷನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರ ಮೊದಲ ಚಿತ್ರಕಥೆ ಮತ್ತು ನಿರ್ದೇಶನದ ಕಿರುಚಿತ್ರ ರಸಂ ಪ್ರಸ್ತುತ ಭಾರತೀಯ ಹಾಗೂ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಈ ಚಿತ್ರಕ್ಕಾಗಿ ಅವರು ಹಲವು ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಉತ್ತಮ ಮಹಿಳಾ ನಿರ್ದೇಶಕ ಪ್ರಶಸ್ತಿಯನ್ನು ಗಳಿಸಿದ್ದಾರೆ.

 

ನವ್ಯ ಶ್ರೀ ಸ್ವತಂತ್ರ ಗ್ರಾಫಿಕ್ ಡಿಸೈನರ್. ಮೈಸೂರಿನ ಅಮೃತ ವಿಶ್ವ ವಿದ್ಯಾಪೀಠಂನಿಂದ ವಿಜುಯಲ್ ಮೀಡಿಯಾದಲ್ಲಿ B.Sc. ಪದವಿಯನ್ನು ಪಡೆದಿದ್ದು, ಪ್ರಸ್ತುತ ICAT ಡಿಸೈನ್ ಮತ್ತು ಮೀಡಿಯಾ ಕಾಲೇಜಿನಲ್ಲಿ ಸ್ನಾತಕೋತ್ತರ ವಿಧ್ಯಾರ್ಥಿನಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮ ನಿರ್ವಹಕರಾಗಿಯೂ ಕೆಲಸ ಮಾಡಿದ ಅನುಭವವಿದ್ದು, ವಿಜುಯಲ್ ಕಮ್ಯೂನಿಕೇಶನ್ ಮತ್ತು ಬ್ರ್ಯಾಂಡಿಂಗ್ ನಲ್ಲಿ ನಿಪುಣರಾಗಿದ್ದಾರೆ. ಆಕರ್ಷಕ ಕಥೆಗಳನ್ನು ಚಲನಚಿತ್ರಗಳ ಮೂಲಕ ಜಗತ್ತಿಗೆ ತಲುಪಿಸುವುದು ನವ್ಯ ಶ್ರೀ ಯವರ ಕನಸಾಗಿದೆ.

 

ಶ್ರೀವತ್ಸ ಬಿ. ಸೇಂಟ್ ಜೋಸೆಫ್ ಕಾಲೇಜ್ ಆಫ್ ಕಾಮರ್ಸ್ ನಿಂದ ಬಿಬಿಎ ಪದವೀಧರರಾಗಿದ್ದು, ಬ್ರ್ಯಾಂಡಿಂಗ್ ವಲಯದಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಹವಾಮಾನ ಬಿಕ್ಕಟ್ಟಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದು, ಫ್ರೈಡೇಸ್ ಫಾರ್ ಫ್ಯೂಚರ್ ಮತ್ತು ಝಟ್ಕಾ ಸಂಸ್ಥೆಗಳೊಂದಿಗೆ ಹಾಗೂ ಸಾಮಾಜಿಕ ಕಾರ್ಯಕರ್ತರಾದ ದಿಯಾ ಮಿರ್ಜಾ ಮತ್ತು ದಿಶಾ ರವಿಯವರೊಂದಿಗೆ ಕೆಲಸ ಮಾಡಿದ್ದಾರೆ. ಜೊತೆಗೆ, ಡಿಸ್ಟೋಪಿಯಾ ಇಂಡಿಯಾ ಎಂಬ ಪ್ರಾಣಿ ಕಲ್ಯಾಣ ಸಂಸ್ಥೆಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

 

ರೋಹನ್ ದೇವ್ ಪಿ ಬೆಂಗಳೂರಿನಲ್ಲಿ ವಿಎಫ್ಎಕ್ಸ್ ಕಲಾವಿದ ಮತ್ತು ವೀಡಿಯೊಗ್ರಾಫರ್ ಆಗಿದ್ದು, ದೃಶ್ಯ ಮಾಧ್ಯಮ ಕಲೆಯಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. 3ಡಿ ಸಿನೆಮಾಟೋಗ್ರಫಿ ಮತ್ತು ಡಿಸೈನ್‌ನಲ್ಲಿ ಪರಿಣತಿ ಹೊಂದಿದ್ದಾರೆ. ವಿಜುವಲ್ ಇಫೆಕ್ಟ್ಸ್‌ನಲ್ಲಿ ಬ್ಯಾಚೆಲರ್ ಪದವಿಯನ್ನು ಪಡೆದಿದ್ದು, ಚಲನಚಿತ್ರ ನಿರ್ದೇಶನಕ್ಕೆ ಪ್ರವೇಶಿಸಿ ಮನಮೋಹಕ ಸಿನೆಮಾಗಳನ್ನು ಸೃಷ್ಟಿಸುವ ಸಂಕಲ್ಪ ಹೊಂದಿದ್ದಾರೆ.

 
 
bottom of page