ಕರ್ನಾಟಕದ ಸಮಕಾಲೀನ ಸಾಧಕಿಯರು
- Avala Hejje
- Dec 10, 2023
- 1 min read
Updated: Feb 28
“ಕರ್ನಾಟಕದ ಸಮಕಾಲೀನ ಸಾಧಕಿಯರು” ಎಂಬ ವಿಶೇಷ ವೀಡಿಯೊ ಸಂದರ್ಶನ ಸರಣಿ ವಿವಿಧ ಕ್ಷೇತ್ರಗಳಲ್ಲಿ (ಶಿಕ್ಷಣ, ಔಷಧ, ಮಾಧ್ಯಮ, ಕಲೆ, ಸಾಹಿತ್ಯ, ಚಲನಚಿತ್ರ,ರಾಜಕೀಯ, ವಿಜ್ಞಾನ ಮತ್ತು ತಂತ್ರಜ್ಞಾನ ಸೇರಿದಂತೆ) ಯಶಸ್ವಿಯಾಗಿರುವ ಅನೇಕ ಮಹಿಳೆಯರನ್ನು ಕರ್ನಾಟಕದ ಜನತೆಗೆ ಪರಿಚಯಿಸುತ್ತದೆ.
ಅಲ್ಲದೇ, ಈ ವೇದಿಕೆಯ ಮೂಲಕ ಯಶಸ್ವಿ ಮಹಿಳೆಯರ ಅನುಭವಗಳಿಂದ ಕಲಿಯುವ ಮತ್ತು ತಮ್ಮ ಆಯ್ಕೆಯ ಕ್ಷೇತ್ರಗಳ ಸಾಧಕಿಯರೊಂದಿಗೆ ಸಂವಾದ ನಡೆಸುವ ಅವಕಾಶವನ್ನು ಒದಗಿಸುತ್ತದೆ.
ತಮ್ಮೆಲ್ಲಾ ಕೆಲಸಗಳ ಮಧ್ಯದಲ್ಲಿ ಬಿಡುವು ಮಾಡಿಕೊಂಡು ನಮ್ಮೊಂದಿಗೆ ಮಾತನಾಡಿದ ಮಾದರಿ ಮಹಿಳೆಯರ ಉದಾರತೆ ಮತ್ತು ಸಹಾಯಕ್ಕಾಗಿ ನಾವು ಚಿರಋಣಿ.
“ಅವಳ ಹೆಜ್ಜೆ” ಯ ಮೂಲಕ ಯಶಸ್ವಿ ಮಹಿಳೆಯರನ್ನು ಗುರುತಿಸಿ, ಸಂಪರ್ಕ ಬೆಳೆಸುವುದರ ಜೊತೆಗೆ ಎಲೆಮರೆಯ ಕಾಯಿಗಳನ್ನು ಬೆಳಕಿಗೆ ತರುವ ಮೂಲಕ ಮಹಿಳೆಯರು ಆಧುನಿಕ ಚರಿತ್ರೆಯನ್ನು ದಾಖಲಿಸುವ ಪ್ರಯತ್ನ ಈ ಸಂದರ್ಶನ ಸರಣಿ.
ಅವಳ ಹೆಜ್ಜೆ ಯುಟ್ಯೂಬ್ ಚಾನಲ್
ಮಾದರಿ ಸಾಧಕಿಯರಿಂದ ಅವರು ನಡೆದು ಬಂದ ಹಾದಿ, ಅವರ ಕೌಶಲ್ಯ, ಜಾಣ್ಮೆ, ಕನಸಿನ ಗುರಿ ಮುಟ್ಟುವಲ್ಲಿ ಅವರಿಗೆದುರಾದ ಅಡಚಣೆಗಳು, ಸವಾಲುಗಳನ್ನು ಅವರು ಎದುರಿಸಿದ ರೀತಿ ಮುಂತಾದ ವಿವರಗಳನ್ನು ಕೇಳಿ ತಿಳಿದುಕೊಳ್ಳೋಣ. ಅವಳ ಹೆಜ್ಜೆ ಯುಟ್ಯೂಬ್ ಚಾನಲ್ಲ್ ನಲ್ಲಿ ವೀಡಿಯೋ ಸಂದರ್ಶನ ಸರಣಿಗಳನ್ನು ನೋಡಬಹುದು. ಹೊಸ ವೀಡಿಯೋ ಗಳು ಪ್ರಕಟವಾದ ಸೂಚನೆ ಪಡೆಯಲು “ಸಸ್ಕ್ರೈಬ್” ಮಾಡಿ.